Posts

ಭಾಗ್ಯದ ಬಳೆಗಾರ

ಭಾಗ್ಯಾದ ಬಳೇಗಾರ ಹೋಘಿ ಬಾ ನನ್ ತವರೀಗೆ ಇನ್ನೆಲ್ಲಿ ನೋಡಾಲಿಂಥ ಬಳೇಗಾರ ಸೆಟ್ಟಿ ನಮ್ಮ ನಾಡ್ಳಿ ಬಳೆಯಿಲ್ಲ | ಬಳೇಗಾರ ಹೋಘಿ ಬಾರಯ್ಯ ನನ್ನ ತವರೀಗೆ || ನಿನ್ನ ತವರೂರ ನಾನೇನು ಬಲ್ಲೇನು ಗೊತ್ತಿಲ್ಲ ಎನಗೆ ಗುರಿಯಿಲ್ಲ | ಎಲೆಬಾಲೆ ತೋರಿಸು ಬಾರೆ ತವರೂರ || ಬಾಳೆ ಬಲಕ್ಕೆ ಬಿಡೂ, ಸೀಬೆ ಎಡಕ್ಕೆ ನಟ್ಟನಡುವೇನೆ ನೀನು ಹೋಗು | ಬಳೆಗಾರ ಅಲ್ಲಿಹುದೆನ್ನ ತವರೂರು || ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ ಹೆಂಚಿನ ಮನೆ ಕಾಣೊ ಕಂಚಿನ ಕದ ಕಾಣೊ ನಿಂತಾವು ಎರಡು ಗಿಳಿಕಾಣೋ | ಬಳೆಗಾರ ಅಲ್ಲಿಹುದೆನ್ನ ತವರೂರು || ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ ಆಲೆ ಆಡೂತ್ತಾವೆ, ಗಾಣಾ ತಿರುಗುತ್ತಾವೆ ನವಿಲು ಸಾರಂಗ ನಲಿದಾವೆ | ಬಳೆಗಾರ ಅಲ್ಲಿಹುದೆನ್ನ ತವರೂರು || ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ ಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರಹಾಕಿ ನಟ್ಟನಡೂವೇನೆ ಪಗಡೆಯ | ಆಡುತಾಳೆ ಅವ್ಳೆ ಕಣೊ ನನ್ನ ಹಡೆದವ್ವ || ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ ನನ್ನ ಹಡೆದವ್ಗೆ ಬಲು ಆಸೆ | ಬಳೆಗಾರ ಕೊಂಢೋಗೊ ಎನ್ನ ತವರೀಗೆ || ಭಾಗ್ಯಾದ ಬಳೇಗಾರ ಹೋಘಿ ಬಾ ನನ್ ತವರೀಗೆ ನಿನ್ನ ತವರೂರ ನಾನೀಗ ಬಲ್ಲೆನು ಗೊತ್ತಾಯ್ತು ಎನಗೆ ಗುರಿಯಾಯ್ತು | ಎಲೆ ಹೆಣ್ಣೆ ಹೋಗಿ ಬರುತೀನಿ ತವರೀಗೆ ||