ಭಾಗ್ಯದ ಬಳೆಗಾರ

ಭಾಗ್ಯಾದ ಬಳೇಗಾರ ಹೋಘಿ ಬಾ ನನ್ ತವರೀಗೆ
ಇನ್ನೆಲ್ಲಿ ನೋಡಾಲಿಂಥ ಬಳೇಗಾರ ಸೆಟ್ಟಿ
ನಮ್ಮ ನಾಡ್ಳಿ ಬಳೆಯಿಲ್ಲ | ಬಳೇಗಾರ
ಹೋಘಿ ಬಾರಯ್ಯ ನನ್ನ ತವರೀಗೆ ||

ನಿನ್ನ ತವರೂರ ನಾನೇನು ಬಲ್ಲೇನು
ಗೊತ್ತಿಲ್ಲ ಎನಗೆ ಗುರಿಯಿಲ್ಲ | ಎಲೆಬಾಲೆ
ತೋರಿಸು ಬಾರೆ ತವರೂರ ||

ಬಾಳೆ ಬಲಕ್ಕೆ ಬಿಡೂ, ಸೀಬೆ ಎಡಕ್ಕೆ
ನಟ್ಟನಡುವೇನೆ ನೀನು ಹೋಗು | ಬಳೆಗಾರ
ಅಲ್ಲಿಹುದೆನ್ನ ತವರೂರು ||

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ
ಹೆಂಚಿನ ಮನೆ ಕಾಣೊ ಕಂಚಿನ ಕದ ಕಾಣೊ
ನಿಂತಾವು ಎರಡು ಗಿಳಿಕಾಣೋ | ಬಳೆಗಾರ
ಅಲ್ಲಿಹುದೆನ್ನ ತವರೂರು ||

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ
ಆಲೆ ಆಡೂತ್ತಾವೆ, ಗಾಣಾ ತಿರುಗುತ್ತಾವೆ
ನವಿಲು ಸಾರಂಗ ನಲಿದಾವೆ | ಬಳೆಗಾರ
ಅಲ್ಲಿಹುದೆನ್ನ ತವರೂರು ||

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ
ಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರಹಾಕಿ
ನಟ್ಟನಡೂವೇನೆ ಪಗಡೆಯ | ಆಡುತಾಳೆ
ಅವ್ಳೆ ಕಣೊ ನನ್ನ ಹಡೆದವ್ವ ||

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ
ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ನನ್ನ ಹಡೆದವ್ಗೆ ಬಲು ಆಸೆ | ಬಳೆಗಾರ
ಕೊಂಢೋಗೊ ಎನ್ನ ತವರೀಗೆ ||

ಭಾಗ್ಯಾದ ಬಳೇಗಾರ ಹೋಘಿ ಬಾ ನನ್ ತವರೀಗೆ
ನಿನ್ನ ತವರೂರ ನಾನೀಗ ಬಲ್ಲೆನು
ಗೊತ್ತಾಯ್ತು ಎನಗೆ ಗುರಿಯಾಯ್ತು | ಎಲೆ ಹೆಣ್ಣೆ
ಹೋಗಿ ಬರುತೀನಿ ತವರೀಗೆ ||

Comments